Tuesday, October 16, 2012

ಕೋಡಗನ ಕೋಳಿ ನುಂಗಿತ್ತ

ಜಿ. ಪಿ. ರಾಜರತ್ನಂ ಅವರ "ಕೋಳಿಕೆ ರಂಗ" ಕೇಳಿ, ಶಿಶುನಾಳ ಶರೀಫರ "ಕೋಡಗನ ಕೋಳಿ" ನೆನಪಿಗೆ ಬಂದಿತು

http://www.kannadaaudio.com/Songs/Folk/KodaganaKoliNungitta/KodaganaKoliNungitta.ram

ಕೋಡಗನ ಕೋಳಿ ನುಂಗಿತ್ತ 
ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತ

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತ

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೆ ನೆಲ್ಲು ನುಂಗಿತ್ತ

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನನ್ನೆ ಮಣಿಯು ನುಂಗಿತ್ತ

ಎತ್ತು ಜತ್ತಗಿ ನುಂಗಿ
ಬತ್ತ ಬಾಣವ ನುಂಗಿ
ಮುಕ್ಕುಟ ತಿರುವೊ ಅಣ್ಣನ ಕುಣಿಯು ನುಂಗಿತ್ತ

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯು ನುಂಗಿ
ಗೋವಿಂದ ಗುರುವಿನ ಪಾದ ನನ್ನನೆ ನುಂಗಿತ್ತ