Friday, December 7, 2012

ಪಡುವಣ ದಿಕ್ಕಿನ ಮೋಡದ ಮೇಲೆ

Song - ಪಡುವಣ ದಿಕ್ಕಿನ ಮೋಡದ ಮೇಲೆ
Lyrics - K S NarasimhaSwamy
Music - B K Seetharama Rao
Singer - Kishore Duth
Album - Nava Pallava
Link - http://www.kannadaaudio.com/Songs/Bhaavageethe/Navaoallava/Paduvana.ram


ಪಡುವಣ ದಿಕ್ಕಿನ ಮೋಡದ ಮೇಲೆ
ಇರುವುದು ನಮ್ಮಯ ಊರೊಂದು
ಸಿಡಿಲಿನ ಮಿಂಚಿನ ಗುಡುಗಿನ ಊರು
ಅದರಂತಿರುವುದೆ ಬೇರೊಂದು?

ಬನಗಳ ಗಿಡಗಳ ಕೊಂಬೆಯ ಮೇಲೆ
ಕೋಗಿಲೆ ಗಾನವ ಪಾಡುವುದು
ಗಾನದ ಇಂಪಿನ ಮೋಡದ ಮೇಲೆ
ರಸಿಕರನೇರಿಸುತೊಯ್ಯುವುದು

ಕೊಳಗಳ ದಡಗಳ ಕುಂಜಗಳಲ್ಲಿ
ಕೊಳಲನ್ನೂದುವ ಕಬ್ಬಿಗರು
ಹೂವನು ಚುಂಬಿಸಿ ಹೃದಯಕೆ ಒತ್ತುತ
ಇನಿಯಳ ನೆನೆಯುವ ಕಬ್ಬಿಗರು

ಸಂಜೆಯ ರಾಗದಿ ಕಾಂಬರು ಕವಿಗಳು
ದೇವನ ಸೃಷ್ಟಿಯ ಸೊಬಗೊಂದ
ಕಬ್ಬಿಗ ತನ್ನಯ ಕವನವ ಹಾಡಲು
ಜಗದಲಿ ಮೂಡುವುದಾನಂದ
 

Thursday, December 6, 2012

ಹಕ್ಕಿಯ ಹಾಡಿಗೆ

Song - ಹಕ್ಕಿಯ ಹಾಡಿಗೆ
Album - Iruvantige
Lyrics - K S NarasimhaSwamy
Singer - Shimogga Subbanna & Rathnamala Prakash
 
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ

Wednesday, December 5, 2012

ಗಿರಿಯ ಶಿರದ ಮೇಲೆ

Song - ಗಿರಿಯ ಶಿರದ ಮೇಲೆ ಸರಿವ
Album - Iruvantige
Lyrics - K S NarasimhaSwamy
Singer - Rathnamala Prakash

ಗಿರಿಯ ಶಿರದ ಮೇಲೆ ಸರಿವ
ಬಿಳಿಯ ಮುಗಿಲ ಸೆರಗಿನಿಂದ
ಮಿನುಗು ತಾರೆ ನಲಿವಿನಿಂದ
ನನ್ನ ಕರೆಯಿತು 

ಬನದ ಎಲರ ಉಸಿರಿನಿಂದ
ದಳವ ತೆರೆದ ಹೂವಿನಿಂದ
ಮೊರೆವ ದುಂಬಿ ಒಲವಿನಿಂದ
ನನ್ನ ಕರೆಯಿತು 

ಬಿದಿರ ಮೆಳೆಯ ನೆಳಲಿನಿಂದ
ಕೇಳಿ ಬಂದ ಕೊಳಲಿನಿಂದ
ಚೆಲುವು ತುಂಬು ಗೆಲುವಿನಿಂದ
ನನ್ನ ಕರೆಯಿತು



Tuesday, December 4, 2012

ಮುಂಜಾನೆ ಮಂಜೆಲ್ಲ ಚಂದಾಗೈತೆ

Foggy view from our backyard this morning - inspiration for today's post.
Song - ಮುಂಜಾನೆ ಮಂಜೆಲ್ಲ ಚಂದಾಗೈತೆ
Album - Mavu Bevu
Lyrics - Doddarangegowda
Singer - S P Balasubramaniam
Link - http://www.kannadaaudio.com/Songs/Bhaavageethe/MavuBevu/Munjanne.ram


ಮುಂಜಾನೆ ಮಂಜೆಲ್ಲ ಚಂದಾಗೈತೆ..
ಸಂಗಾತಿ ತುಟಿ ಹಂಗೆ, ಹವಳಾದ ಮಣಿ ಹಂಗೆ ಹೊಳಪಾಗೈತೆ...

ಸಂಪಿಗೆ ತೂಗಿ ಚೆಂಡು ಹೂ ಬಾಗಿ
ನೇಸರ ನಗೆಸಾರ ಶುರುವಾಗೈತೆ
ಸೂಲಂಗಿ ತೆನೆಗೆ ಬಾಳೆಲೆ ಗೊನೆಗೆ
ತಂಗಾಳಿ ಸುಳಿದಾಡಿ ಹಾಡಾಗೈತೆ
ಕಣ್ಣಾಗಿ ಸಂಗಾತಿ ಕುಣಿದ್ಹಾಂಗೈತೆ
                                                     
ಮೋಡದ ದಂಡು ಓಡೋದ ಕಂಡು
ರಂಗೋಲಿ ವೈನಾಗಿ ಬರೆದ್ಹಂಗೈತೆ
ಆಕಾಶದ ಬದಿಗೆ ಗುಡ್ಡದ ತುದಿಗೆ
ಹೊಂಬಿಸಿಲು ರಂಗಾಗಿ ಬೆಳಕಾಗೈತೆ
ಮೈದುಂಬಿ ಮನಸೋತು ಮೆರೆದ್ಹಾಂಗೈತೆ.

Monday, December 3, 2012

ಏನೀ ಮಹಾನಂದವೆ ಓ ಭಾಮಿನಿ

Lyricist - ?
Music Director - Mysore Ananthaswamy
Singer - M D Pallavi

Link - http://mio.to/97jt

ಏನೀ ಮಹಾನಂದವೆ ಓ ಭಾಮಿನಿ
ಏನೀ ಸಂಭ್ರಮದಂದವೆ ಬಲು ಚೆಂದವೆ
ಏನೀ ವೃತ್ತಾಮೋದ ಏನೀ ಮೌರಜ ನಾದ
ಏನೀ ಜೀವೋನ್ಮಾದ ಏನೀ ವಿನೋದ

ಢಕ್ಕೆಯ ಶಿರಕ್ಕೆತ್ತಿ ತಾಳಗೋಲಿಂ ತಟ್ಟಿ
ತಕ್ಕಿಟ ಧಿಮಿಕಿಟ ಝಣುರೆನ್ನಿಸಿ
ಕುಕ್ಕುತ ಚರಣವ ಕುಲುಕುತ ಕಾಯವ
ಸೊಕ್ಕಿದ ಕುಣಿತವ ಕುಣಿವೆನೀನೆಲೆ ಬಾಲೆ

ಆರು ನಿನ್ನಯ ಹೃದಗಾರದಿ ನರ್ತಿಸಿ
ಮಾರ ಶೂರತೆಯ ಪ್ರಚಾರಿಸುತಿರ್ಪನ್
ಸ್ನೇರವದನ ನಮ್ಮ ಚೆನ್ನ ಕೇಶವರಾಯ
ಓರೆಗಣ್ಣಿಮ್ ಸನ್ನೆ ತೋರುತಲಿಹನೆನೆ